Back
ಸಂಸ್ಥೆಯ ಬಗ್ಗೆ

ಸರ್ಕಾರಿ ಪಾಲಿಟೆಕ್ನಿಕ್, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ ಸಂಸ್ಥೆಯು 2008-09ರಲ್ಲಿ ಆರಂಭಗೊಂಡ ಕರ್ನಾಟಕದ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ಹಚ್ಚ ಹಸಿರಿನ  ಸುಂದರ ನಿಸರ್ಗದ ಮಡಿಲಿನಲ್ಲಿ 12054' ಅಕ್ಷಾಂಶ ಮತ್ತು 75002' ರೇಖಾಂಶವಿರುವ 6.09ಎಕ್ರೆ ವಿಸ್ತೀರ್ಣದ ವಿಸ್ತಾರವಾದ ಭೂಪ್ರದೇಶದಲ್ಲಿ 3752ಚ.ಮೀಟರಿನ  ಸುಂದರ ಕಟ್ಟಡವನ್ನು ಹೊಂದಿರುತ್ತದೆ. ಸರ್ಕಾರಿ ಪಾಲಿಟೆಕ್ನಿಕ್, ಬಂಟ್ವಾಳವು “ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್” ಇದರ ಮಾನ್ಯತೆ ಪಡೆದಿರುವ ಸರ್ಕಾರಿ ಸಂಸ್ಥೆಯಾಗಿದ್ದು, ಕಾಲೇಜು ಮತ್ತು  ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುತ್ತದೆ.

       ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೂರು ವರ್ಷದ ಡಿಪ್ಲೋಮಾ ಪ್ರೋಗ್ರಾಂಅನ್ನು ಈ ಕೆಳಗಿನ ವಿಷಯಗಳಲ್ಲಿ ನೀಡುತ್ತಿದೆ.

1.            ಕಾಮಗಾರಿ ವಿಭಾಗ

2.            ಗಣಕಯಂತ್ರ ವಿಭಾಗ

3.            ವಿದ್ಯುನ್ಮಾನ ಮತ್ತು ಸಂವಹನ ವಿಭಾಗ

4.            ಯಾಂತ್ರಿಕ ವಿಭಾಗ

 ಸಮರ್ಪಣಾಭಾವದ ಅರ್ಹ ನುರಿತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸದಾ ಕಾರ್ಯನಿರತರಾಗಿರುತ್ತಾರೆ.

ಸುಸಜ್ಜಿತ ಪ್ರಯೋಗಾಲಯಗಳು, ಕಾರ್ಯಾಗಾರಗಳು ಮತ್ತು ಸಂಪನ್ಮೂಲ ಕೇಂದ್ರಗಳನ್ನು ಈ ಸಂಸ್ಥೆ ಹೊಂದಿರುತ್ತದೆ.

ಸಂಸ್ಥೆಯು ಸ್ಥಳೀಯ ಸಮುದಾಯದ ಅವಶ್ಯಕತೆಗಳನ್ನು ಗುರುತಿಸಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ಈ ಮೂಲಕ ಅವರನ್ನು ಕೈಗಾರಿಕಾ ತರಬೇತಿಗೆ ತೆರೆದಿಡುತ್ತಿದೆ ಮತ್ತು ಇದು ಸಂಸ್ಥೆ ಮತ್ತು ಕೈಗಾರಿಕಾ ನಡುವಣ ಸಂವಹನವನ್ನು ಸುಗಮಗೊಳಿಸುತ್ತಿದೆ.

ಸಂಸ್ಥೆಯು ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿ ಸೌಲಭ್ಯಗಳು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದ್ದು, ಸ್ವ-ಉದ್ಯೋಗದ ಅವಕಾಶಗಳ ಬಗ್ಗೆ ಸಲಹೆಗಳನ್ನು ನೀಡುತ್ತಿದೆ.

×
ABOUT DULT ORGANISATIONAL STRUCTURE PROJECTS